ಭಾರತದ ಪ್ರಜೆಗಳಿಗೆ ಇನ್ನೂ ಮತದ ಮಹತ್ವ ತಿಳಿದಿಲ್ಲ.ಭಾರತದ ಪ್ರಜೆ ಪ್ರಜ್ಞಾವಂತನಾದರೆ ಆತನನ್ನು ಮೂರ್ಖನನ್ನಾಗಿಸುವ ರಾಜಕಾರಣಿಯ ಷಡ್ಯಂತ್ರಗಳು ನಡೆಯದೆ ಹೋಗುತ್ತವೆ.ದುಡ್ಡಿನ ದರ್ಪದೊಂದಿಗೆ ಚುನಾವಣೆ ಗೆಲ್ಲುತ್ತೇನೆ ಎನ್ನುವ ದುರಾಂಹಕಾರ ಮಣ್ಣಾಗುತ್ತದೆ.ರಾಜಕೀಯವನ್ನು ತಮ್ಮ ಮನೆತನಗಳ ಸ್ವತ್ತು ಎಂದು ಕೊಂಡಿರುವ ಕೆಲವು ಪಟ್ಟಭದ್ರರ ಮಹತ್ವಾಕಾಂಕ್ಷೆ ನಾಶವಾಗುತ್ತದೆ.ರಾಜಕೀಯವನ್ನು ಉದ್ಯಮವಾಗಿಸಿಕೊಂಡಿರುವ ಮಾಹಾ ಮೂರ್ಖರು ಜೈಲಿನ ಪಕ್ಷಿಗಳಾಗಲಿದ್ದಾರೆ.ಹಣದಿಂದ ಅಧಿಕಾರ ಪಡೆಯುವ ತಂತ್ರ ಪ್ರತಿ ತಂತ್ರಗಳು ಟುಸ್ಸ್ ಆಗಲಿವೆ.ಈಗ ಸದ್ಯ ಆಗಬೇಕಾದ ಕೆಲವೇನೆಂದರೆ ಮತದ ಕುರಿತು ಜನ ಸಾಮಾನ್ಯರಿಗೆ ಪ್ರಜ್ಞೆ ಮೂಡಿಸುವುದು.ಯಾವಾಗ ಜನ ಸಾಮಾನ್ಯರು ಮತದ ಮಹತ್ವ ತಿಳಿದುಕೊಳ್ಳುತ್ತಾರೋ,ಆಗ ಭಾರತ ಬದಲಾಗುತ್ತದೆ.ನಿಜವಾದ ಸಂವಿಧಾನ ಅಸ್ತಿತ್ವಕ್ಕೆ ಬರುತ್ತದೆ.ನಿಜವಾದ ಪ್ರಜಾಪ್ರಭುತ್ವ ಅಸ್ತಿತ್ವಕ್ಕೆ ಬರುತ್ತದೆ.ನಿಜವಾದ ಸ್ವಾತಂತ್ರ್ಯ ಲಭ್ಯವಾಗುತ್ತದೆ.
ಇದು ಸಾಧ್ಯವಾದೀತಾ?
ಅನುಮಾನವೇ ಅನ್ನಿಸುತ್ತದೆ.ವಿದ್ಯಾವಂತ ಯುವ ಪೀಳಿಗೆ ಟಿವಿಯ ಮುಂದೆ ಕ್ರಿಕೆಟ್ ಸ್ಕೋರ್ ಕೌಂಟ್ ಮಾಡುವುದರಲ್ಲಿ ಮಗ್ನವಾಗಿದೆ.ಇನ್ನು ಕೆಲವರು ಗುಟುಕಾ,ಪಾನ್,ಸಿಗರೆಟ್, ಪಾರ್ಟಿಗಳಲ್ಲಿ ಮಗ್ನವಾಗಿದ್ದರೆ ಕೆಲ ಮೂರ್ಖ ಯುವಕರು ರಾಜಕಾರಣಿಗಳ ಹೇಲನ್ನು ಪಂಚಭಕ್ಷ್ಯ ಪರಮಾನ್ನ ಎಂದು ಭಾವಿಸಿ ಜೈ ಕಾರ ಹಾಕುವುದರಲ್ಲಿ ಮಗ್ನವಾಗಿದ್ದಾರೆ.
ಸ್ವಾರ್ಥ ನಮ್ಮನ್ನು ಆಳತೊಡಗಿದೆ.ನಾವೆಲ್ಲರೂ ಸ್ವಾರ್ಥದ ಗುಲಾಮಾರಾಗಿದ್ದೇವೆ.ಯಾವತ್ತೂ ನಾವು ಸ್ವಾರ್ಥವನ್ನು ತೊರೆಯುವುದಿಲ್ಲವೋ ಅಲ್ಲಿಯವರೆಗೆ ನಾವು ನರಕಮಯ ಜೀವನದಿಂದ ಆಚೆ ಬರುವುದಿಲ್ಲ.
ಎಲ್ಲಾ ಅರ್ಥದಲ್ಲೂ ನಮ್ಮ DNA ರಿಪೋರ್ಟ ಸರಿ ಇದೆ ಎನ್ನುವುದು ನಿಜ ಎನ್ನುವುದಾದರೆ ನಾವೇಕೆ ಸುಮ್ಮನೆ ಕುಳಿತಿರಬೇಕು?